Friday, November 09, 2007

ಗುಂಡನ ದೀಪಾವಳಿ

ಇಂದು ದೀಪಾವಳಿ.ಎಲ್ಲರಿಗೂ ಡಂ ಡಂ ಹಬ್ಬದ ಡುಂ ಡುಂ ಶುಭಾಶಯಗಳು.

ಕಬ್ಬಿನ ಜಲ್ಲೆ ಹಿಡಿದು ನಡೆದ ಗುಂಡನ್ನನ್ನು ನೋಡಿ ಗುರುಗಳು ವಿಚಾರಿಸಿದರಂತೆ, "ಏನೋ ಗುಂಡ, ಹಬ್ಬ ಜೋರಾ? ಹೇಗೆ ಆಚರಿಸಿದೆ?".
ಇರುವ ಮೂವತ್ತೆರೆಡೂ ಗಿಂಜಿ," ಆಗ್ತಾ ಇದೆ, ಗುರುಗಳೇ", ಗುಂಡ ನುಡಿದ.

"ಏಳ್ಳು - ಬೆಲ್ಲ, ಸಕ್ಕರೆ ಅಚ್ಚು, ಕಬ್ಬು ಇವೆಲ್ಲ ಸ್ನೇಹಿತರಿಗೆ ಬೀರಿ, ಮನೆಯಲ್ಲಿ ಬೊಂಬೆ ಕುಂಡ್ರಿಸಿ, ಬೇವು ಬೆಲ್ಲ ತಿಂದು, ಶ್ಯಮಂತಕೋಪಾಖ್ಯಾನ ಓದಿ, ದೀಪಾವಳಿ ಆಚರಿಸಿದೆ."

ಬೇಸ್ತು ಬಿದ್ದ ಗುರುಗಳು," ಅಲ್ಲಯ್ಯ, ದೀಪಾವಳಿಗೆ ದೀಪಾ ಬೆಳಗುವುದಾಗಲಿ, ಪಟಾಕಿ ಸಿಡಿಸೊದಾಗ್ಲಿ ಏನೂ ಮಾಡ್ಲಿಲ್ವೇ?" ಅಂತ ಕೇಳಿದ್ರು.

"ಇಲ್ಲ ಸಾ, ನಾನೇ ಬೇರೆ, ನನ್ನ ಸ್ಟೈಲೇ ಬೇರೆ. ಎಲ್ಲರಂತಲ್ಲ ನಾನು. ಎಲ್ಲರೂ ಮಾಡೊದನ್ನ ಮಾಡೊಕ್ಕೆ ನನಗೆ ಬೋರು" ಎಂದು ಕಾಲರ್ ಪಟ್ಟಿಯನ್ನು ಒಮ್ಮೆ ಹಾಗಂದು, ಗುಂಡ ಮನೆ ಕಡೆ ನಡೆದ.

"ಎಲ್ಲಾರಿಗೂ ಒಂದು ದಾರಿ ಆದ್ರೆ, ಏಡವಟ್ಟನಿಗೇ..." ಅಂತ ಎನೋ ಗುರುಗಳು ಗೊಣಗಿ ನಡೆದ ಹಾಗೆ ಇತ್ತು.

ನಮ್ಮಲ್ಲಿ ಕೆಲವರಿಗೆ ವಿಭಿನ್ನವಾಗಿರುವ ಹುಚ್ಚು. ಎಲ್ಲರೂ ಮಾಡುವುದನ್ನು ತಾವು ಮಾಡಿದರೆ ಅವರ ಘನತೆಗೆ ಅದು ಸರಿಬರುವುದಿಲ್ಲ. ಎಲ್ಲದರಲ್ಲೂ ಅವರ ಅಧಿಕಪ್ರಸಂಗ ಕಾಣಲೇಬೇಕು.ಐದು ಜನರ ಗುಂಪಿನಲ್ಲಿ ಈ ವಿಭಿನ್ನತೆಯಿಂದ ಇವರು ಎದ್ದು ಕಾಣ ಬೇಕ್ಂಬ ಉತ್ಕಟ ಇಚ್ಚೆ.ಅಸಾಧ್ಯರು ಇಂತ ಜನ. ನಮ್ಮ ಗುಂಡನ ಹಾಗೆ. ಆದರೆ ಅವರಿಗೆ ತಿಳಿಯದಿದ್ದ ವಿಷಯವೆನೆಂದರೆ, ವಿಭಿನ್ನವಾಗಿರಲು ವಿಶಿಶ್ಟವಾಗ ಬೇಕೆ ವಿನಃ ವಿಚಿತ್ರವೆನಿಸಬಾರದು ಎಂದು! ಈ ಗುಟ್ಟನ್ನು ನಮ್ಮ ಗುಂಡನಿಗೆ ಯಾರದರು ಪಿಸುಗುಟ್ಟಿ ಬರುವಿರಾ?

5 comments:

L'Étranger said...

ಗುಂಡನ ದೀಪಾವಳಿ ಯಾವಾಗ ಮುಂದುವರೆಯತ್ತೆ? ;)

Srikanth said...

ati sheegra dalle nireekshisi. But, how soon is very soon antha maatra kELa bEDi :P

L'Étranger said...

ಕಡೇಪಕ್ಷ ಸಂಕ್ರಾಂತಿಗೆ ಮುಂಚೆ ಬರಲಿ! ಇಲ್ಲಾಂದ್ರೆ ಗುಂಡನ ಥಿಯರಿಯಲ್ಲಿ ಸ್ವಲ್ಪ ಎಡವಟ್ಟಾಗುವ ಸಾಧ್ಯತೆ ಇರತ್ತೆ! :)

Rayapeddi said...

ಗುಂಡನ ದೀಪಾವಳಿ ಕಥೆ ಹೀಗಾಯ್ತು. ಇನ್ನು, ಸಂಕ್ರಾತಿ, ನವರಾತ್ರಿ ಕಾರ್ಯಕ್ರಮ ಮಸೀದಿಯಲ್ಲಿ ಇಟ್ಟುಕೊಳ್ಳುವನೊ ಏನೊ! ;)

Srikanth said...

Swami l'etranger,

maatu meerade, Sankranti ge munche gunDana deepavaLi ge mangaLa haaDi, nanna "paruvu" kaapaaDkonDideeni [:P]

JK - Hawaii kaDe massedi idre hELuvanthavanaagu.. alle arrange maaDONa. [:D]