Saturday, August 11, 2007

ಆನಂದಮಯ ಈ ಜಗಹೃದಯ

ನನ್ನ ಹೃದಯಕ್ಕೆ ಹತ್ತಿರವಾದ, ನಿಜಕ್ಕೂ ನಿಜವೆನಿಸಿದ ಕುವೆಂಪುರವರ ಕವನ - ಆನಂದಮಯ ಈ ಜಗಹೃದಯ

ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ

ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ

ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನೋ ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ

ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ

ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ

Lyrics: KV Puttappa ;Music:C.Ashwath; Singer : Shimoga Subbanna.
http://www.udbhava.com/udbhava/songs.jsp?id=62

3 comments:

Pradeep said...

ತುಂಬಾ ಚೆನ್ನಾಗಿದೆ ..... ಕವಿಯ ಕಾವ್ಯ ಶಬ್ದ ವರ್ಣನಾತೀತ

Pradeep said...

ತುಂಬಾ ಚೆನ್ನಾಗಿದೆ ..... ಕವಿಯ ಕಾವ್ಯ ಶಬ್ದ ವರ್ಣನಾತೀತ

ಪ್ರವೀಣ್ said...

ಮಾಣೊ ಪದದ ಅರ್ಥವೇನು?