Tuesday, February 19, 2019

ದಾನ ಚಿಂತಾಮಣಿ


ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕ್ಷಮಾನ್ವಿತಂ ಶೌರ್ಯಂ |
ತ್ಯಾಗಸಹಿತಂ ವಿತ್ತಂ ದುರ್ಲಭಮೇತಚ್ಚತುಷ್ಟಯಂ ಲೋಕೇ ||

ದಾನದೊಡನೆ ನಲ್ನುಡಿ, ಜ್ಞಾನದೊಡನೆ ವಿನಯ, ಶೌರ್ಯದೊಡನೆ ಕ್ಷಮೆ ಹಾಗೂ ತ್ಯಾಗದೊಡನೆ ಐಶ್ವರ್ಯ - ನಾಲ್ಕು, ಲೋಕದಲ್ಲಿ ಬಹು ದುರ್ಲಭ.


ದಾತೃತ್ವಂ ಪ್ರಿಯವಕ್ತೃತ್ವಂ ಧೀರತ್ವಮುಚಿತಜ್ಞತಾ |
ಅಭ್ಯಾಸೇನ ಲಭ್ಯಂತೇ ಚತ್ವಾರಃ ಸಹಜಾ ಗುಣಾಃ ||


ದಾನ, ನಲ್ನುಡಿ, ಧೈರ್ಯ, ಇಂಗಿತಜ್ಞತೆ - ನಾಲ್ಕು ಬರಿಯ ಅಭ್ಯಾಸದಿಂದ ಬರುವುದಿಲ್ಲ. ಅವೆಲ್ಲವೂ ಹುಟ್ಟಿನೊಂದಿಗೆ ಇರುವಂತಹವು.

#Daana, 

No comments: