Monday, October 10, 2016

ಸಂನ್ಯಾಸ ಸೂಕ್ತ

न कर्मणा न प्रजया धनेन त्यागेनैके अमृतत्वमानशुः । परेण नाकं निहितं गुहायां विभ्राजदे तद्यतयो विशन्ति ॥१॥ वेदान्तविज्ञानसुनिश्चितार्थाः संन्यास योगाद्यतय शुद्धसत्त्वाः । तेब्रह्मलोके तु परान्तकाले परामृतात्परिमुच्यन्ति सर्वे ॥२॥ दह्रं विपापं परमेश्मभूतं यत्पुण्डरीकं पुरमध्यसग्गस्थम् । तत्रापि दह्रं गगनं विशोकस्तस्मिन् यदन्तस्तदुपासितव्यम् ॥३॥ योवेदादौ स्वरः प्रोक्तो वेदान्ते च प्रतिष्ठितः । तस्य प्रकृतिलीनस्य यः परः स महेश्वरः ॥४॥


ಅಮೃತತ್ವವು ಕರ್ಮಗಳಿಂದಾಗಲಿ, ಸಂತತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಸಾಧಿಸುವುದಿಲ್ಲ . ತಪಸ್ವಿಗಳು ಪಡೆದಿರುವ ಈ ಅಮೃತತ್ವವು ಶುದ್ಧಾಂತರಾಳದಲ್ಲಿ ಪ್ರಕಾಶಮಾನವಾಗಿದ್ದು ಸ್ವರ್ಗಕ್ಕೂ ಮಿಗಿಲಾಗಿರುತ್ತದೆ. ವೇದಾಂತ ವಿಜ್ಞಾನದಿಂದ ನಿಶ್ಚಿತ ಬುದ್ಧಿಯುಳ್ಳವರಾಗಿದ್ದು  ಸನ್ಯಾಸದಿಂದ ಶುದ್ಧಸತ್ವರಾಗಿ ಇವರೆಲ್ಲರೂ ಸಾಧಿಸುತ್ತಿದ್ದು ಅಂತ್ಯಕಾಲದಲ್ಲಿ ಬ್ರಹ್ಮದಲ್ಲಿಯೇ ವಿಲೀನವಾಗುತ್ತಾರೆ. ಪರಮಾತ್ಮವು ದೇಹದೊಳಗೆ ನಿಷ್ಕಲ್ಮಷವಾದ ಹೃದಯ ಕಮಲದಲ್ಲಿರುತ್ತದೆ. ಈ ಹೃದಯ ಕಮಲದಲ್ಲಿ ದುಃಖರಹಿತವಾದ ಆಕಾಶವಿರುತ್ತದೆ. ಈ ಹೃದಯಾಕಾಶವನ್ನೇ ಸಂತತ ಧ್ಯಾನ ಮಾಡಬೇಕು. ಯಾವ ಸ್ವರವು ವೇದಾರಂಭನದಲ್ಲಿ ಮತ್ತು ವೇದಾಂತದಲ್ಲಿ ಪ್ರತಿಷ್ಠಾಪಿತವಾಗಿರುವುದೋ ಆ ಅದೇ ಪ್ರಣವವು ಧ್ಯಾನಕಾಲದಲ್ಲಿ ಅವ್ಯಾಕೃತ ಪ್ರಕೃತಿಯಲ್ಲಿ ಲೀನವಾಗಿ ಅದರ ನಾದವೇ ಪರಮೇಶ್ವರನೆಂದೆನಿಸಿ ಧ್ಯಾನಯೋಗ್ಯವಾಗಿದೆ.  

* न तत्र सुर्यो भाति न चंन्द्रतारकं नेमा विद्युतो भान्ति कुतोऽयमग्निः । तमेव भान्तमनुभाति सर्वं तस्य भासा सर्व मिदं विभाति ॥ 

No comments: