Tuesday, February 12, 2008

ಗಾಳಿಯಲ್ಲಿ ಧಾಳಿ

ಹರಿತವಾದ ಖಡ್ಗ.
ಚೂಪಾದ ತುದಿ.
ಕುಶಾಗ್ರ ಲೋಹ.
ವೀರಾವೇಶದಿಂದ ಹಾಗೊಮ್ಮೆ ಹೀಗೊಮ್ಮೆ ಸರಕ್ಕನೆ ತೂರಾಡಿಸಿ ಬೀಸುತ್ತಿರುವೆ.
ಇದೋ ವೀರಾವೇಷ ತ್ವರಿತವಾಗುತ್ತಿದೆ.
ಅಬ್ಬಬ್ಬಾ ! ಎಂಥಾ ರಭಸ!

ಸುತ್ತ ಹಬ್ಬಿದ ಸ್ತಬ್ಧಗಾಳಿಯ ಸೀಳಿ,
ಇಬ್ಬಾಗಗಳ ಮಾಡುತ
ಅನಂತ ದ್ವಂದ್ವಗಳ ರೇಖೆಗಳ
ಕ್ಷಣಕ್ಕೆರಡಂತೆ ರಚಿಸಿ ಅಳಿಸುತ್ತಿದೆ.
ಗಾಳಿಯಲ್ಲಿಯೇ.

ದಿನವಿಡೀ ನಡೆದ ಎದುರಾಳಿಯೇ ಇಲ್ಲದ ಪ್ರಚಂಡ ಕಾಳಗ.
ಸುಸ್ತಾಯಿತು. ಸೂರ್ಯಾಸ್ತವಾಯಿತು.
ಇನ್ನು ಗುಡಾರ ಸೇರಿ ದಿನದ ಪೆಟ್ಟು ಗಾಯಗಳಿಗೆ ಮುಲಾಮು ಹಚ್ಚುವ ಸಮಯ.
ಸರಸರನೆ ನಡೆಯ ಬೇಕು.
ನಾಳೆ ರಣಕಹಳೆ ಅರ್ಧತಾಸು ಮುಂಚೆಯೇ ಮೊಳಗಲಿದೆಯಂತೆ.
==

miami lakes, FL. 12-Feb-2008 11:30 PM

5 comments:

Manjunatha Kollegala said...

"ಎದುರಾಳಿಯೇ ಇಲ್ಲದ ಪ್ರಚಂಡ ಕಾಳಗ.
ಸುಸ್ತಾಯಿತು. ಸೂರ್ಯಾಸ್ತವಾಯಿತು"

"ನಾಳೆ ರಣಕಹಳೆ ಅರ್ಧತಾಸು ಮುಂಚೆಯೇ ಮೊಳಗಲಿದೆಯಂತೆ"

Effective lines... as I said, if you can achieve economy in expression/words/letters, it will b wonderful

L'Étranger said...

ಒಟ್ಟಾರೆ ಒಳ್ಳೆಯ ರೂಪಕ.... ಚನ್ನಾಗಿ ವ್ಯಕ್ತವಾಗಿದೆ. :)

ಹರಿತವಾದ ಖಡ್ಗ.
ಚೂಪಾದ ತುದಿ.
ಕುಶಾಗ್ರ ಲೋಹ.

ಈ ಸಾಲುಗಳು ಹೆಚ್ಚು-ಕಡಿಮೆ ಒಂದೇ ಅರ್ಥ ಕೊಡುತ್ತವೆ. ಕೆಲವೊಮ್ಮೆ ಒಂದೇ ಅರ್ಥ ಕೊಡುವ ಸಾಲುಗಳು ಮೂಲ ಭಾವವನ್ನು reinforce ಮಾಡುತ್ತವಾದರೂ ಇಲ್ಲಿ ಯಾಕೋ ಸ್ವಲ್ಪ redundant ಆಗಿ ಪದ್ಯದ ಆರಂಭವನ್ನು ಟೊಳ್ಳು ಮಾಡಿದ್ದಾವೇನೋ ಅನ್ನಿಸುತ್ತಿದೆ. ನನ್ನ ಅನಿಸಿಕೆ ಅಷ್ಟೆ ಇದು, ಬೇರೆಯವರು ಇದನ್ನು ಬೇರೆ ರೀತಿಯೇ ನೋಡಬಹುದು! :)

ಧಾಳಿ? ಈ ಉಪಯೋಗ ಸರಿ ಇರಬಹುದಾದರೂ ಚಲಾವಣೆಯಲ್ಲಿ ಇಲ್ಲ. ಬೇಕಂತಲೇ ಉಪಯೋಗಿಸಿದ ಪದವೋ ಅಥವಾ typo for ದಾಳಿ?

Shiv said...

>>ದಿನವಿಡೀ ನಡೆದ ಎದುರಾಳಿಯೇ ಇಲ್ಲದ ಪ್ರಚಂಡ ಕಾಳಗ

ಅದ್ಬುತವಾಗಿದೆ ಸಾಲು..
ಚೆನ್ನಾಗಿ ಮೂಡಿಬಂದಿದೆ ಕವನ