Thursday, June 14, 2007

ಅವನು

ಹೊರಗೆ ಧಾರಾಕಾರವಾಗಿ ಮಳೆ. ಗರ್ಭಗುಡಿಗೆ ಬೀಗ ಬಿಗಿದು, ದೇವರನ್ನು ಪೂಜಾರಪ್ಪ ಕೂಡಿಟ್ಟು ಹೋಗಿದ್ದಾಗಿತ್ತು.ಮಳೆಗಾಲ ನೋಡಿ; ಘಂಟೆ ಏಳು ಹೋಡೆಯುವಷ್ಟರಲ್ಲಿ ಶಾಸ್ತ್ರಿಗಳು ಬೇಚ್ಚಗೆ ಮನೆ ಸೇರುತಿದ್ದರು. ತದನಂತರ ಭಗವಂತನಿಗೆ ಏಕಾಂತ ಸೇವೆಯೇ ಗಟ್ಟಿ. ಈತ ನಡುಗುತ್ತ ಅಲ್ಲಿ ತಲುಪಿದಾಗ ಕಡುಗತ್ತಲೆ.ಹೋರಗೆ ಧಾರಕಾರವಾಗಿ ಮಳೆ. ಗರ್ಭಗುಡಿಯಲ್ಲಿ ಸಣ್ಣನೆಯ ನಂದಾದೀಪ. ತುಸು ಬೇಳಕು. ಲಿಂಗದ ಮೇಲೆ ನಿರ್ಮಾಲ್ಯದ ಹೂವು.ಜಟಾಶಂಕರನ ಜಟೆಯ ಮೇಲೆ ಓಣಗಿದ ತುಂಬೆಹಾರ. ಬಹಳಾ ಹೆದರಿದ್ದ ಪಾಪ. ಮುಂಜಾನೆಯಾಗುವಷ್ಟರಲ್ಲಿ ಏನಾದರು ಮಾಡಿ ಸಮಸ್ಯೆಗೆ ಪರಿಹಾರ ಹುಡುಕಲೇ ಬೇಕು. ಮುಂದಿನ ಊರು ಸೇರೋಣವೆಂದರೆ ಮಳೆ. ರಸ್ತೆ ಹದಗೇಟ್ಟಿದೆ. ಏತ್ತಿನ ಗಾಡಿಯ ಬಗ್ಗೆ ನೆನೆಯುವುದೂ ನಿರರ್ಥಕ. ನಿಸ್ಸಹಾಯನಾಗಿ ಸುಕನಾಸಿಯಿಂದ ಗರ್ಭಗುಡಿಯ ಬಳಿ ಬಂದು ಅಲ್ಲೆ ಕುಳಿತ. ನುಡುಗುತ್ತಿದ ಪಾಪ. ಮುಂಜಾನೆ ಇಂದ ಏನೂ ತಿಂದಿರಲಿಲ್ಲ. ಒಮ್ಮೆ ದೇವರನ್ನು ಹರಕೆ ಮಾಡಿ, ಬೇಡಿಕೊಂಡು ನಮಸ್ಕರಿಸುವ ಭಾವ ಮೂಡಿತು. ಕೈ ಜೋಡಿಸಿ ಮುಕ್ಕಣ್ಣನಿಗೆ ಮುಗಿಯುವಷ್ಟರಲ್ಲಿ ಅಡ್ಡ ಬಂದದ್ದು ಅಹಂಭಾವ. ಅಥವಾ.... ಅಹಂಭಾವವಿರಲಾರದು. ವ್ಯಕ್ತಿ ಒಳ್ಳೆಯವನು.ದುರಹಂಕಾರಿಯಲ್ಲ ಬಿಡಿ. ನಾಳೆ ಮುಂಜಾನೆ ವೇಳೆಗೆ ಏನಾದರೊಂದು ಆಗಲೇ ಬೇಕು. ಇತ್ಯರ್ಥವಾಗಲೇ ಬೇಕು. ಮತ್ತೋಮ್ಮೆ ಭಗವಂತನನ್ನು ಭಕ್ತಿಮಾಡಿ ಓಲಿಸಿಕೋಳ್ಳುವ ಪ್ರಯತ್ನ ನಡೆಯಿತು. ಈ ಗಂಡಾಂತರದಿಂದ ಶಿವಪ್ಪ ಪಾರು ಮಾಡಬಹುದು, ಆದರೆ ನಾನು ಚಿರಕಾಲ ಶಿವನ ಆಧೀನನಾಗ ಬೇಕೇನೊ ಏಂಬ ವಿರೋಧಾಭಾಸವಾದ ಭಾವ ಬಂದು ಕಾಡಿತು. ಸುಮ್ಮನಾದ. ನಾಳೆ ಸೋಲೋ - ಗೇಲುವೋ , ಏನಾದರೊಂದು ಆಗಲಿ. ಆದರೆ ನಾಳಿನ ಜಯದ ಸಲುವಾಗಿ ಮುಕ್ಕಣ್ಣನಿಗೆ ಮುಗಿದು, ಜೀವನ ಪರ್ಯಂತ ಶಿವನ ಬಂದಿ ಆಗಲಾರ. ನಾಳಿನ ಅಪಜಯವೇ ಮೇಲು; ಚಿರಕಾಲದ ಆಧೀನಕ್ಕಿಂತ. ದೇವರ ಮೇಹರುಬಾನಿ ನನಗೇನು ಬೇಡ. ನನ್ನ ನೋವು- ನಲಿವು ನನಗೆ ಇರಲಿ. ತಿರುಗಿ ಹೋರಗೆ ನಡೆಯಲಾರಂಭಿಸಿದ. ಹೋಗಲಾಗಲಿಲ್ಲ. ಲಿಂಗದ ಮುಂದೆ ನಿಂತು 'ದೇವರಿಲ್ಲದಿರಲಿ' ಎಂದು ದೇವರನ್ನೆ ಪ್ರಾರ್ಥಿಸಿ, ಮತ್ತೆ ಪ್ರಾಕಾರದ ಕಡೆಗೆ ನಡೆಯುವಷ್ಟರಲ್ಲಿ, ಗಾಳಿ ಬೀಸಿ ದೀಪ ಆರಿತು. ಕತ್ತಲ್ಲಲ್ಲಿ ಮುಕ್ಕಣ್ಣೇಷ್ವರ ತನ್ನೋಳಗೆ ತಾನೆ ನಕ್ಕನಂತೆ. ಸೋತ ತುಂಬೆಯ ಹಾರ ಕೇಳಗೆ ಬಿದ್ದಿತು.ಈತ ನಡುಗುತ್ತಿದ. ಮಳೆ ಇನ್ನು ಹೇಚ್ಚಾಗುತ್ತಿದೆ. ಮಿಂಚು. ಗುಡುಗು.ಸಮಯ ಮುಂಜಾನೆ ನಾಲ್ಕು ಘಂಟೆ.

1 comment:

Manjunatha Kollegala said...

ಶರಣಾಗುವ ಅನಿವಾರ್ಯ, ಶರಣಾಗಬಾರದೆನ್ನುವ ಅಹಂಭಾವ, ಆಗಲೇ ಬಂದಿಯಾಗಿಸಿಯೇ ಬಿಟ್ಟಿರುವ ಸುರಿಯುವ ಮಳೆ, ಆರಿದ ದೀಪ, ಸೊರಗಿದ ತುಂಬೆ... ಪ್ರತಿಮೆಗಳು ಗಾಢವಾಗಿ ಅರ್ಥವನ್ನು ಕಟ್ಟಿ ಕೊಡುತ್ತವೆ. ಉತ್ತಮ ಪ್ರಯತ್ನ