Friday, August 18, 2006

ಶಾಶ್ವತಿ.

ನೀ ಬಂದು ನನ್ನ
ಬರಡಾದ ಬಾಳು
ಬೆಳಗಿತೆಂದು ನಾ
ನಿನ್ನಲ್ಲಿ ನನ್ನಿಯನು
ನುಡಿಯೆನು ನಲ್ಲೆ !

ಸುಖಿಯಾದ
ನನ್ನ ಜೀವಿತಕೆ ಸಖಿ ನೀ ,
ಸಂತಸವು
ಶಾಶ್ವತವೆನಿಸಿದೆ ಎಂಬುದಷ್ಟೆ
ನಾ ಬಲ್ಲೆ !!


ವಿ. ಸೂ : ಪದ್ಯ , ಚುಟುಕ , ಕವಿತೆ ಎನೂ ಅಲ್ಲ . ಸುಮ್ನೆ ಹಾಗೆ ಬರ್ದಿದ್ದು.




ಕನಸು .. ಕಾರ್ಮುಗಿಲು ...

. -ಶ್ರೀ ಸಾಮಾನ್ಯ

ಬಾಂದಳದ ಆಯದಲಿ ಕಾರಿರುಳ ಗವಸು
ಪರಿವೆ ಪರಧಿಯ ಮೀರಿ ಮರುಗಿಹುದು ಮನಸು

ತರಣಿಗೊದಗಿದ ಗ್ರಹಣ ಪಟಲವಂಬರದಿ
ಪದುಳ ಕ್ಷೀಣಿಸುತಿಹುದು ವರವಿಲ್ಲ ಮನದಿ

ಬಾಳಿನೋಗಟೆಯ ಘಾತಿಸಲಾಗದಾ ಧುರೆಯೋ
ಕ್ಷಿತಿಕಂಪದೆಲರಲ್ಲಿ ಸಿಲುಕಿರುವ ಧರೆಯೋ

ಮನದ ಎಳಸಿಕೆ ವಿಲಯ ವಿಧಿಯ ನಿರ್ಘಾತ
ಮಿಸುಕು ಜೀವಿತಕಿನ್ನು ಹೊಂಗನಸು ಶೋಣಿತ

ಭವರೋಗ ಭೇಷಜವೆ ಗರಲವಾರಿಧಿಯಾಗೆ
ಮುಕುರ ಮೂರ್ಚೂರಾಯ್ತು ಬರಡಾಯ್ತು ಒಳಿತೆಸಗೆ


1 comment:

bhadra said...

ಶಾಶ್ವತಿ ಕನ್ನಡ ವಿಶ್ವದಲ್ಲಿ ಶಾಶ್ವತ ಸ್ಥಾನ ಹೊಂದುವುದರಲ್ಲಿ ಸಂಶಯವೇ ಇಲ್ಲ.

ಎಂತಹ ಸುಂದರ ಕಾವ್ಯಗಳನ್ನು ಸಮರ್ಪಿಸಿದ್ದೀರಿ. ವಾಹ್! ಮನದಾನಂದವಾಯಿತು.

ಓದುಗರಿಗೆ ಅನುಕೂಲವಾಗುವ ಸಲುವಾಗಿ ಒಂದೆರಡು ಕ್ಲಿಷ್ಟ ಪದಗಳಿಗೆ ಅರ್ಥವನ್ನು ಕೊಟ್ಟರೆ ಇನ್ನೂ ಚಂದವಾಗಿರುತ್ತದೆ. ತರಣಿ, ಪದುಳ, ಒಗಟೆ, ಧುರೆ, ಶೋಣಿತ ಮತ್ತು ಎಸಗೆ - ಇವುಗಳಿಗೆ ಅರ್ಥ ಬರೆದುಬಿಡಿ.

ಮೊದಲ ಬಾಲಿನಲ್ಲೇ ಷಟ್ಕಾರ ಹೊಡೆದ ಶ್ರೀಕಾಂತರಿಗೆ (ಕೃಷ್ಣಮಾಚಾರಿಯರ ನೆನಪಾಗುತ್ತಿಲ್ಲವೇ) ಶುಭವನ್ನು ಕೋರುತ್ತಿರುವೆ. :)