Saturday, July 27, 2024

ಆತ್ಮಚಿಂತನಂ

 

ಕ್ಷಣಂ ಬ್ರಹ್ಮಾಹಂ ಅಸ್ಮಿ ಇತಿ ಯಃ ಕುರ್ಯಾತ್ ಆತ್ಮಚಿಂತನಂ ತನ್ಮಹಾಪಾತಕಂ ಹಂತಿ ತಮಃ ಸೂರ್ಯೋದಯಂ ಯಥಾ 

ಇಚ್ಛತಿ ಶತೀ ಸಹಸ್ರಂ

ಇಚ್ಛತಿ ಶತೀ ಸಹಸ್ರಂ ಸಹಸ್ರೀ ಲಕ್ಷಮೀಹತೇ |

ಲಕ್ಷಾಧಿಪಸ್ತಥಾ ರಾಜ್ಯಂ ರಾಜ್ಯಸ್ಥಃ ಸ್ವರ್ಗಮೀಹತೇ || 

(ಪಂಚತಂತ್ರ)

ನೂರುಳ್ಳವನು ಸಾವಿರವನ್ನು, ಸಾವಿರವುಳ್ಳವನು ಲಕ್ಷವನ್ನೂ, ಲಕ್ಷಾಧಿಪನು ರಾಜ್ಯವನ್ನೂ, ರಾಜ್ಯವುಳ್ಳವನು ಸ್ವರ್ಗವನ್ನೂ ಮೇಲೆ ಮೇಲೆ ಬಯಸುತ್ತಲೇ ಇರುತ್ತಾನೆ.


ಜಾಮಾತಾ ಜಠರಂ ಜಾಯಾ ಜಾತವೇದಾ ಜಲಾಶಯಃ |

ಪೂರಿತಾ ನೈವ ಪೂರ್ಯಂತೇ ಜಕಾರಾಃ ಪಂಚ ದುರ್ಭರಾಃ || 

(ಸುಭಾಷಿತರತ್ನಭಾಂಡಾಗಾರ)


ಜಾಮಾತ (ಅಳಿಯ), ಜಠರ (ಹೊಟ್ಟೆ), ಜಾಯಾ (ಹೆಂಡತಿ), ಜಾತವೇದ (ಬೆಂಕಿ) ಮತ್ತು ಜಲಾಶಯ (ಸಮುದ್ರ) - ಈ ಐದು 'ಜ'ಕಾರಗಳನ್ನು ತುಂಬಿಸಿ ತೃಪ್ತಿಪಡಿಸಲು ಸಾಧ್ಯವಿಲ್ಲ.