Tuesday, May 28, 2024

ತಂ ವಂದೇ ಗಜಾನನಂ

ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ ।
ಯಂ ನತ್ವಾ ಕೃತಕೃತ್ಯಾಃ  ಸ್ಯುಃ ತಂ ವಂದೇ ಗಜಾನನಂ ॥ 

ಬ್ರಹ್ಮನೇ ಮೊದಲಾದ ದೇವತೆಗಳು ಎಲ್ಲ ಕೆಲಸಗಳನ್ನು ಆರಂಭಿಸುವಾಗ ಯಾರನ್ನು ನಮಸ್ಕರಿಸಿ ಕೃತಕೃತ್ಯರಾಗುತ್ತಾರೋ ಆ ಗಣಪತಿಯನ್ನು ನಮಸ್ಕರಿಸುತ್ತೇನೆ. 



Saturday, May 18, 2024

ವಂದನೀಯಾ ನಿರಂತರಂ


 ಪುಣ್ಯಶ್ಲೋಕೋ ನಳೋ ರಾಜಾ ಪುಣ್ಯಶ್ಲೋಕೋ ವಿಭೀಷಣಃ ।

ಪುಣ್ಯಶ್ಲೋಕಾ ಚ ವೈದೇಹೀ ವಂದನೀಯಾ ನಿರಂತರಂ ॥ 


ನಳಮಹರಾಜನು ಕಷ್ಟ-ಸುಖಗಳು ಶಾಶ್ವತವಲ್ಲ, ಎಂದೂ ಧರ್ಮಮಾರ್ಗವನ್ನು ಬಿಡಬಾರದು' ಎಂಬ ಸಂದೇಶನೀಡಿ 'ಪುಣ್ಯಶ್ಲೋಕ' ಎನಿಸಿದ್ದಾನೆ. ನಳನ ಸ್ಮರಣೆಯಿಂದ ಕಲಿನಾಶವಾಗುತ್ತಾನೆ ಎಂಬ ನಂಬಿಕೆ ಇದೆ. ವಿಭೀಷಣನು ಅಧರ್ಮಿಯಾದ ಅಣ್ಣನನ್ನೇ ತ್ಯಜಿಸಿ, ಧರ್ಮದ ಮೂರ್ತಿಯಾದ ರಾಮನಿಗೆ ಶರಣಾಗಿ, ಸಾತ್ವಿಕಗುಣದ ಮೂರ್ತಿಯಾಗಿ ಶೋಭಿಸಿದ್ದಾನೆ.ಶ್ರೀ ರಾಮನ ಪತ್ನಿ ಸೀತಾ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪತಿಭಕ್ತಿಯನ್ನು ಬಿದದೇ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡ ಸಾಧ್ವಿಯಾಗಿ, ಅದರ್ಶಸ್ತ್ರೀರತ್ನಳಾಗಿದ್ದಾಳೆ.