Monday, January 01, 2007

ಒಲವೇ ಚೆಲುವು !!!

ಎಲ್ಲರಂತಿಲ್ಲ ನನ್ನ ನಲ್ಲೆ
ಮೇಘವರ್ಣ , ನಿಜ ಶ್ಯಾಮಲೆ

ಹೇಳಿಕೊಳ್ಳುವಂತಹ
ಸ್ಪುರದೄಪಿಯೇನಲ್ಲ ಬಿಡಿ.
ಸಾಮಾನ್ಯೆ ... ಈ ಕನ್ಯೆ

ಗುಂಪಿನಲ್ಲಿ ನಿಂತರೆ
ಎದ್ದು ಕಾಣದಂತ ನೀರೆ
ಕಮಲದಳ ಸಮಾನ ಕಂಗಳು..
ನೈದಿಲೆಯ ಹೋಲುವ ಮುಗುಳು ನಗು ..
ಇವಾವವು ಇಲ್ಲ...

ಲೋಕವು ಬಯಸುವ ರೂಪವತಿಯಲ್ಲ ..
ನನ್ನ ಹೃದಯೇಶ್ವರಿ...ಶಾಶ್ವತಿ.. ಶ್ಯಾಮಲೆ

ಎಂತಿದ್ದರೇನಂತೆ - ಇವಳಿದ್ದಂತೆಯೇ ನನಗೆ ಓಲವು...
ಏಕೆಂದರೆ.. 'ಒಲವೇ ಚೆಲುವಲ್ಲವೇ' ?

. ಶ್ರೀ ಸಾಮನ್ಯ

ಇದು ಪದ್ಯ ಅಲ್ಲ .. ಸುಮ್ನೆ ಹಾಗೆ .. ಅಂತರಂಗದ ಮಾತು ಅವತರಿಸಿದೆ.

1 comment:

bhadra said...

ಎಲ್ಲರಂತವನಲ್ಲ ನನ ಗಂಡ ಬಲ್ಲಿದನು ... ಶರೀಫ ಸಾಹೇಬರ ಪದ್ಯ ನೆನಪಾಗುತ್ತಿದೆ.

ಮನವನು ಸೂರೆಗೊಂಡವಳ ಮುಂದೆ ಇನ್ನೆಲ್ಲಿಯ ರೂಪಸಿ. ಭೌತಿಕ ರೂಪ ಇಂದಿದ್ದು ನಾಳೆ ಇಲ್ಲವಾಗುವುದು. ಅದೇ ಮನದಲಿ ಮೂಡಿದ ರೂಪ ಚಿರವಾಗಿರುವುದು. ಈ ಕವನವನ್ನು ಓದುತ್ತಿರುವಾಗ ನನಗೆ ನೆನಪಾದದ್ದು ಇನ್ನೊಂದು

ನಾ ಕರಿಯನೆಂದು ನೀ ಜರಿಯಬೇಡ
ಬಿಳಿ ಗೆಳತಿ ಗರ್ವದಿಂದ
ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು
ಹೇಳಾವ ಹಿರಿಮೆಯಿಂದ

ಎರಡನೆಯ ಬಾಲಿಗೆ ಮತ್ತೊಂದು ಷಟ್ಕಾರ (ಇನ್ನೊಂದು ಚುಟುಕಕ್ಕೆ ಪ್ರತಿಕ್ರಿಯೆ ನೀಡಲು ಅವಕಾಶವೇ ಇಲ್ಲವಲ್ಲ :( )